ಮಹಮ್ಮದ್ ಮನೆಯಲ್ಲಿ ಏನು ಅಡಿಗೆ? ಮಾದನು ಅವನ ಮನೆಗೆ ಊಟಕ್ಕೆ ಹೋಗಿದ್ದ, ಏನು ತಿಂದ? ಬೋರನ ಎತ್ತುಗಳು ಮುದಿಯಾಗಿವೆ ಆದರೂ ಅವನು ಅವನ್ನ ಮಾರಬಾರದು! ಪ್ರೀತಿಸಿದ ಈರ್ವರು ಧರ್ಮದ ಕಾರಣದಿಂದ ಮದುವೆಯಾಗಬಾರದು, ಅವರ ಮಗು ಭ್ರೂಣವಾಗಿದ್ದಾಗಲೇ ಹೊಟ್ಟೆಯಲ್ಲೇ ಕೊಲ್ಲಿರಿ. ಮಾಜಿ ಸಿ.ಎಮ್ ಈ ದಿನ ಕೋಳಿ ತಿನ್ನಂಗಿಲ್ಲ, ದಲಿತ ಕುದುರೆ ಏರಂಗಿಲ್ಲ
+
ಆ ಹೆಣ್ಣು ಅವಳಿಷ್ಟದ ಉಡುಗೆ ತೊಡುವಂಗಿಲ್ಲ, ಇದೆಲ್ಲ ಮಾಡುವುದರಿಂದ ಧರ್ಮ ಉಳಿಯುತ್ತದೆ ಎಂದು ಮನೆಯ ಬೆಡ್ರೂಮ್ ವರೆಗೂ ಮೂಲಭೂತವಾದಿಗಳ ಮಾರಲ್ ಪೋಲಿಸಿಂಗ್ ಇವತ್ತು ಬಂದು ನಿಂತಿದೆ.

ಇನ್ನೊಂದುಕಡೆ ಅರಿವುಗೆಟ್ಟ ಪ್ರೊಪ಼ೆಸರ್ & ಅವನ ಗೋಲ್ಡ್ ಮೆಡಲ್ ಹೆಂಡತಿ ತಮ್ಮ ಎರಡು ಹೆಣ್ಣುಮಕ್ಕಳನ್ನ ಸತ್ಯಯುಗದಲ್ಲಿ ಹುಟ್ಟಿಸಲು ಈ ಯುಗದಲ್ಲಿ ಕೊಂದಿದ್ದಾರೆ
+
ವೈಜ್ಞಾನಿಕ ಮತ್ತು ಮುಂದುವರೆದ ದೇಶ ಮಾಡುತ್ತೇವೆಂದು ಪಣ ತೊಟ್ಟ ಭಾರತೀಯರು ಸೋತಿದ್ದೇವೆ, ಹ್ಯಾಪಿ ರಿಪಬ್ಲಿಕ್ ಡೇ ಎಂದು ನಗುನಗುತ್ತಾ ಹೇಳುತ್ತಿದ್ದೇವೆ; ಸಂವಿಧಾನದ ಆಶಯಗಳನ್ನ ಮರೆತು, ಅದರ ಅಸ್ತಿತ್ವವನ್ನೇ ಇಲ್ಲವಾಗಿಸಿ, ಪಬ್ಲಿಕ್ ನ ಮೂಲವಾದ ರೈತ ಒಂದೆಡೆ ಅಪಾರ ಸಾವುಗಳನ್ನ ಹೇರಿಕೊಂಡು ಟ್ರ್ಯಾಕ್ಟರ್ನಲ್ಲಿ ಪೆರೇಡಿಸಿಕೊಂಡು ನ್ಯಾಯಕ್ಕಾಗಿ
+
ಹವಣಿಸುತ್ತಿದ್ದರೆ ದಿನಕ್ಕೊಮ್ಮೆ ಬಂದು ಭಾಷಣ ಬಿಗಿಯೋ ದೇಶದ ಚೌಕಿದಾರ ಎಲ್ಲಿ?? ಗಣರಾಜ್ಯದ ಮತ್ತು ಪೂರ್ಣ ಸ್ವರಾಜ್ಯದ ಆಶಯಗಳನ್ನ ಮರೆಯದಿರಿ.
-ಬಂಡಾಯದ ಗುಂಡಿಗೆ
#ಅಂಬೇಡ್ಕರ್ #ದಾದಾಭಾಯಿನವರೋಜಿ #ಮೋಹನ್ದಾಸ್_ಗಾಂಧಿ #ಗಣರಾಜ್ಯೋತ್ಸವ #HistoricTractorMarch #TractorVsTraitors #FarmersProstests #DalitLivesMatter #Equality
You can follow @TheSosale_.
Tip: mention @twtextapp on a Twitter thread with the keyword “unroll” to get a link to it.

Latest Threads Unrolled:

By continuing to use the site, you are consenting to the use of cookies as explained in our Cookie Policy to improve your experience.