Long thread.
ಶ್ರೀ ರಾಮನ ಬಗ್ಗೆ ಇಲ್ಲಸಲ್ಲದನ್ನೆಲ್ಲಾ ಹೇಳುವವರಿಗೆ ರಾಮನನ್ನು ಮರ್ಯಾದಾ ಪುರುಷೋತ್ತಮ ಎಂದು ಏಕೆ ಹೇಳುತ್ತಾರೆ ತಿಳಿದಿದೆಯೇ ?
ವಿಷ್ಣುವಿನ ಅವತಾರವಾದ ಶ್ರೀ ರಾಮ ಮನುಷ್ಯನಾಗಿ ಹುಟ್ಟಿ ತನ್ನ ಆದರ್ಶ ಧರ್ಮ ಪರಿಪಾಲನೆಯಿಂದಾಗಿ ದೇವರಾದವನು.
ಶ್ರೀ ರಾಮನ ಬಗ್ಗೆ ಇಲ್ಲಸಲ್ಲದನ್ನೆಲ್ಲಾ ಹೇಳುವವರಿಗೆ ರಾಮನನ್ನು ಮರ್ಯಾದಾ ಪುರುಷೋತ್ತಮ ಎಂದು ಏಕೆ ಹೇಳುತ್ತಾರೆ ತಿಳಿದಿದೆಯೇ ?
ವಿಷ್ಣುವಿನ ಅವತಾರವಾದ ಶ್ರೀ ರಾಮ ಮನುಷ್ಯನಾಗಿ ಹುಟ್ಟಿ ತನ್ನ ಆದರ್ಶ ಧರ್ಮ ಪರಿಪಾಲನೆಯಿಂದಾಗಿ ದೇವರಾದವನು.
ರಾಮ ಹುಟ್ಟುವ ಮುಂಚೆ ದೇಶದ ಪರಿಸ್ಥಿತಿ ಅಷ್ಟೇನೂ ಒಳ್ಳೆಯದಿರಲಿಲ್ಲ, ದಶರಥ ರಾಜನಿಗೆ 3 ಪತ್ನಿಯರಿದ್ದರೂ ಮಕ್ಕಳಿರಲಿಲ್ಲ, ಪರಶುರಾಮರಂತೂ ಇದ್ದಬದ್ದ ಕ್ಷತ್ರಿಯರೆಲ್ಲರನ್ನೂ ಸಾಯಿಸುತ್ತಿದ್ದರು ಇದರಿಂದ ದೇಶಕ್ಕೆ ಸರಿಯಾದ ರಕ್ಷಣೆಯಿರುತ್ತಿರಲಿಲ್ಲ.
ಇಂತಹ ಸಂದರ್ಭದಲ್ಲಿ ಹುಟ್ಟಿದವರು ರಾಮ ಮತ್ತು ಅವನ ಸಹೋದರರು.
ಇಂತಹ ಸಂದರ್ಭದಲ್ಲಿ ಹುಟ್ಟಿದವರು ರಾಮ ಮತ್ತು ಅವನ ಸಹೋದರರು.
ಪ್ರತಿಭಾವಂತರು, ಸಣ್ಣ ಪ್ರಾಯದಲ್ಲಿಯೇ ಜನರ ವಿಶ್ವಾಸ ಪ್ರೀತಿ ಸಂಪಾದಿಸಿದ್ದರು. ಅನಂತರ ಸುಬಾಹು ಮಾರೀಚರಂತಹ ದಾನವರನ್ನು ಸೋಲಿಸಿ ಸಾಹಸ ಮೆರೆಯುತ್ತಾರೆ, ರಾಮ ಶಿವ ಧನುಸ್ಸನ್ನು ಮುರಿದು ಸೀತೆಯನ್ನು ವರಿಸುತ್ತಾನೆ. ಆಗ ಕೋಪದಿಂದ ಅಲ್ಲಿಗೆ ಬರುವ ಪರಶುರಾಮರನ್ನು ಸೋಲಿಸಿ ಅವರ ಕೋಪಾಗ್ನಿ, ಪ್ರತಿಕಾರಕ್ಕೂಂದು ಪೂರ್ಣವಿರಾಮವನ್ನಿಡುತ್ತಾನೆ.
ಎಲ್ಲರ ಮನದಲ್ಲಿ ಸ್ಥಾನ ಪಡೆದ ರಾಮ ತನ್ನದೇ ಸೈನ್ಯ ಕಟ್ಟಿಕೊಂಡು ರಾಜ್ಯವಾಳಬಹುದಿತ್ತು, ತಮ್ಮಂದಿರು, ಮಂತ್ರಿಮಂಡಲ ಎಲ್ಲರೂ ಅವನ ಜೊತೆ ನಿಲ್ಲುತ್ತಿದ್ದರು, ಆದರೆ ರಾಮ ಪಿತೃವಾಕ್ಯ ಪರಿಪಾಲನೆಗಾಗಿ ಸಕಲೈಷ್ವರ್ಯಗಳನ್ನೂ ತ್ಯಜಿಸಿ ಕಾಡಿನ ದಾರಿ ಹಿಡಿದ. ಮಕ್ಕಳು ಕೇವಲ ಮಾತಾಪಿತರ ಆಸ್ತಿಪಾಸ್ತಿಗಳಿಗಷ್ಟೇ ವಾರಸುದಾರರಲ್ಲ
ಬದಲಿಗೆ ಅವರ ಗೌರವ ಕಾಪಾಡುವುದು, ಕುಲದ ಮರ್ಯಾದೆಯ ಹೊಣೆ ಕೂಡ ಹೊತ್ತಿರುತ್ತಾರೆ ಎಂಬುದನ್ನು ಬಾರಿಯ ಬಾಯಿ ಮಾತಿನಲ್ಲಿ ಹೇಳದೆ ಹಾಗೆಯೆ ನಡೆದು ತೋರಿಸಿ ಕೊಟ್ಟ, ಆಗ ರಾಮ ಶ್ರೀರಾಮಚಂದ್ರನಾಗುತ್ತಾನೆ.
ನಂತರ ಬರುವದು ಶೂರ್ಪನಖಿಯ ಅವಮಾನ (?). ಶೂರ್ಪನಖಿ ಕಾಡಿನಲ್ಲಿ ರಾಮನ್ನು ಕಂಡಾಗ ಅವನ ಮೇಲೆ ಮೋಹವುಂಟಾಗಿ ಅವನಲ್ಲಿ ಬರುತ್ತಾಳೆ, ರಾಮ ಅವಳನ್ನು ತಿರಸ್ಕರಿಸಿ ತಾನು ವಿವಾಹಿತ ಏಕಪತ್ನಿವೃತಸ್ಥ ಎಂದು ಅವಳ ಮನಃಪರಿವರ್ತಿಸಲು ನೋಡಿದರೂ ಒಪ್ಪದೇ ದೈಹಿಕ ಸಂಬಂಧಕ್ಕೆ ಯತ್ನಿಸುತ್ತಾಳೆ, ರಾಮ ತೀವ್ರವಾಗಿ ವಿರೋಧಿಸಿದಾಗ ಲಕ್ಷ್ಮಣನ ಬಳಿ ಹೋಗುತ್ತಾಳೆ ಅಲ್ಲೂ
ಅಲ್ಲೂ ಅದೇ ಕಥೆ! ಸೀತೆಯನ್ನು ಸಾಯಿಸಲು ಯತ್ನಿಸುತ್ತಾಳೆ. ರಾಮ ತಾಳ್ಮೆಯ ಪ್ರತೀಕ ಹೆಣ್ಣೆಂದು ಶಃಸ್ತ್ರ ಪ್ರಯೋಗ ಮಾಡಲಿಲ್ಲ, ಆದರೆ ಕೋಪಿಷ್ಠ ಲಕ್ಷ್ಮಣ ಮೂಗು ಕತ್ತರಿಸಿ ಬಿಟ್ಟ. ಶೂರ್ಪನಖಿ ಖರ ಧೂಷಣರನ್ನು ಯುದ್ಧಕ್ಕೆ ಕಳುಹಿಸುತ್ತಾಳೆ, ರಾಮಲಕ್ಷ್ಮಣರು ಗೆಲ್ಲುತ್ತಾರೆ. ರಾವಣ ಬಳಿ ಹೋಗಿ ಇರುವುದು ಇಲ್ಲದಿರುವುದು ಎಲ್ಲವೂ ಹೇಳುತ್ತಾಳೆ, ಅವನು
ಅವನು ನಿಜವಾಗಿಯೂ ತಂಗಿಯ ಮೇಲೆ ಮಮತೆ ಇದ್ದವನಾದರೆ ನೇರವಾಗಿ ಯುದ್ಧಕ್ಕೆ ಬರುತ್ತಿದ್ದ, ಆದರೆ ಮೋಸದಿಂದ ಸೀತೆಯನ್ನು ಅಪಹರಿಸಿಕೊಂಡು ಹೋದ.
ಶಿವ ಧನುಸ್ಸನ್ನು ಎತ್ತಲಾಗದೆ ಸೋತು ರಾಮನ ಮೇಲೆ ಇದ್ದ ಹೊಟ್ಟೆ ಉರಿ ತಣಿಸಿಕೊಂಡ.
ಶಿವ ಧನುಸ್ಸನ್ನು ಎತ್ತಲಾಗದೆ ಸೋತು ರಾಮನ ಮೇಲೆ ಇದ್ದ ಹೊಟ್ಟೆ ಉರಿ ತಣಿಸಿಕೊಂಡ.
ಅಶೋಕವನದಲ್ಲಿ ಸೀತೆಯನ್ನು ಕಾಡಿ, ಅಸಹಾಯಕಳಾಗಿ ಮಾಡಿ ಅವಳಾಗಿಯೇ ಒಲಿದು ಬರಲಿ ಎಂದು ಒಂದು ವರ್ಷದ ಗಡುವು ನೀಡಿದ.
ಸೀತೆಯನ್ನು ರಾವಣ ಮುಟ್ಟಲಿಲ್ಲ ಎಂಬ ಕಾರಣಕ್ಕೆ ಅವನೇನು ಸಾಧ್ವಿ ಎಂದಲ್ಲ. ( ಅವನನ್ನು ಹೀರೋ ಎನ್ನುವವರು ಇದ್ದಾರಲ್ಲ)
ಸೀತೆಯನ್ನು ರಾವಣ ಮುಟ್ಟಲಿಲ್ಲ ಎಂಬ ಕಾರಣಕ್ಕೆ ಅವನೇನು ಸಾಧ್ವಿ ಎಂದಲ್ಲ. ( ಅವನನ್ನು ಹೀರೋ ಎನ್ನುವವರು ಇದ್ದಾರಲ್ಲ)
ಕಿಷ್ಕಿಂಧ - ಅಲ್ಲಿ ಸುಗ್ರೀವನ ವ್ಯಥೆ ತಿಳಿದು ವಾಲಿಯನ್ನು ಕೊಲ್ಲದೆ ಕಿಷ್ಕಿಂಧೆಯಲ್ಲಿ ಶಾಂತಿ ಸ್ಥಾಪಿಸಲು ಸಾಧ್ಯವಲ್ಲ ಎಂದರಿತಾಗ ಮರೆಯಲ್ಲಿ ನಿಂತು ( ವಾಲಿಗೆ ವಿಶೇಷ ವರವಿದ್ದ ಕಾರಣ) ಕೊಲ್ಲುತ್ತಾನೆ. ಆಗಲೂ ಕೂಡ ರಾಮ ಮುಂದೊಮ್ಮೆ ತನನ್ನು ಜನ ಮರೆಯಲ್ಲಿ ನಿಂತು ಬಾಣ ಪ್ರಯೋಗ ಮಾಡಿದ್ದಕ್ಕೆ ನಿಂದಿಸುತ್ತಾರೆ ಎಂದು ಯೋಚಿಸಲಿಲ್ಲ.
ತನ್ನ ಪ್ರತಿಷ್ಠೆಯನ್ನು ಪಣಕಿಟ್ಟು ಧರ್ಮ ಸ್ಥಾಪಿಸುತ್ತಾನಲ್ಲ, ಆಗ ರಾಮ ಶ್ರೀರಾಮಚಂದ್ರನಾಗುತ್ತಾನೆ.
ರಾಮ ಚಂಚಲ ಮನಸ್ಸು ಇರುವ ವನರನ್ನು ಒಟ್ಟುಗೂಡಿಸಿ ಸೇತುವೆ ಕಟ್ಟಿ ರಾವಣನನ್ನು ವಧಿಸಿ ಲಂಕಾಧಿಪತಿ ಆಗುವ ಅವಕಾಶವಿದ್ದರೂ ವಿಭೀಷಣನಿಗೆ ಪಟ್ಟ ಕಟ್ಟಿ,"ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ" ಎಂದು ಅಯೋಧ್ಯೆಗೆ ಮರಳುತ್ತಾನೆ
ರಾಮ ಚಂಚಲ ಮನಸ್ಸು ಇರುವ ವನರನ್ನು ಒಟ್ಟುಗೂಡಿಸಿ ಸೇತುವೆ ಕಟ್ಟಿ ರಾವಣನನ್ನು ವಧಿಸಿ ಲಂಕಾಧಿಪತಿ ಆಗುವ ಅವಕಾಶವಿದ್ದರೂ ವಿಭೀಷಣನಿಗೆ ಪಟ್ಟ ಕಟ್ಟಿ,"ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ" ಎಂದು ಅಯೋಧ್ಯೆಗೆ ಮರಳುತ್ತಾನೆ
ಆಗ ರಾಮ ಶ್ರೀರಾಮಚಂದ್ರನಾಗುತ್ತಾನೆ.
ರಾಮ ಸೀತೆಯನ್ನು ಸಂದೇಹದಿಂದ (?) ನೋಡಿ ಗರ್ಭಿಣಿಯನ್ನು ಕಾಡಿಗಟ್ಟಿದ ಎಂದು ಹಳಿಯುತ್ತಾರಲ್ಲ ಅವನೇನು ಇನ್ನೊಂದು ಮದುವೆಯಾಗಿ ಸುಖವಾಗಿರಲಿಲ್ಲ,
ರಾಮ ಸೀತೆಯನ್ನು ಸಂದೇಹದಿಂದ (?) ನೋಡಿ ಗರ್ಭಿಣಿಯನ್ನು ಕಾಡಿಗಟ್ಟಿದ ಎಂದು ಹಳಿಯುತ್ತಾರಲ್ಲ ಅವನೇನು ಇನ್ನೊಂದು ಮದುವೆಯಾಗಿ ಸುಖವಾಗಿರಲಿಲ್ಲ,
ಸೀತೆಗೆ ಕಾಡಿನಲ್ಲಿ ನೋವನ್ನು ಹಂಚಿಕೊಳಲ್ಲು ರಿಷಿಗಳು, ಅಶ್ರಮವಾಸಿಗಳಿದ್ದರು. ಕಾಡಿನಲ್ಲಿಯೂ ಸೀತೆ ಒಂಟಿಯಾಗಿರಲಿಲ್ಲ, ರಾಮ ಅರಮನೆಯಲ್ಲಿಯೂ ಒಂಟಿಯಾಗಿದ್ದ.
ಒಂದು ವೇಳೆ ಸೀತೆಯನ್ನು ಕಾಡಿಗೆ ಕಳುಹಿಸದೆ ಆ ಅಗಸನನ್ನು ಶಿಕ್ಷಿಸಿದ್ದಿದ್ದರೆ
ಒಂದು ವೇಳೆ ಸೀತೆಯನ್ನು ಕಾಡಿಗೆ ಕಳುಹಿಸದೆ ಆ ಅಗಸನನ್ನು ಶಿಕ್ಷಿಸಿದ್ದಿದ್ದರೆ
ರಾಮ ಇಷ್ಟು ವರ್ಷ ಕಟ್ಟಿ ಬೆಳೆಸಿದ್ದ ಧರ್ಮದ ಅಡಿಪಾಯ ಕೂಸಿಯುತಿತ್ತು, ಆದರ್ಶ ನೆಲಸಮವಾಗುತಿತ್ತು.
ತನ್ನ ಸ್ವಾರ್ಥವನ್ನು ನೋಡದೆ ಸಮಾಜದ ಒಳಿತಿನ ಬಗ್ಗೆ ಯೋಚಿಸಿದ ರಾಮ ಶ್ರೀರಾಮಚಂದ್ರನಾಗುತ್ತಾನೆ.
ತನ್ನ ಸ್ವಾರ್ಥವನ್ನು ನೋಡದೆ ಸಮಾಜದ ಒಳಿತಿನ ಬಗ್ಗೆ ಯೋಚಿಸಿದ ರಾಮ ಶ್ರೀರಾಮಚಂದ್ರನಾಗುತ್ತಾನೆ.
ಒಬ್ಬ ಆದರ್ಶ ಮಗನಾಗಿ, ಒಬ್ಬ ಆದರ್ಶ ಅಣ್ಣನಾಗಿ, ನಿಷ್ಕಲ್ಮಶ ಪ್ರೇಮಿಯಾಗಿ, ನೆಚ್ಚಿನ ರಾಜನಾಗಿ, ದೊಡ್ಡ ದೇಶಭಕ್ತನಾಗಿ ಸಮಾಜದಲ್ಲಿ ಮರ್ಯಾದೆ ಆದರ್ಶ ಸ್ಥಾಪಿಸಿದ ಶ್ರೀರಾಮಚಂದ್ರ, ಮರ್ಯಾದಾ ಪುರುಷೋತ್ತಮ, ನಮ್ಮ ದೇವರು. ಕೃಷ್ಣ ಆದರ್ಶಗಳನ್ನು ಭಗವದ್ಗೀತೆಯ ಮೂಲಕ ತಿಳಿಸಿದರೆ ರಾಮನ ಸಂಪೂರ್ಣ ಜೀವನವೇ ಆದರ್ಶ.
For the record, not copied from elsewhere, wrote my opinion.
And ignore typos if any.