#Thread
ಕರ್ನಾಟಕದ ವೀರ ವನಿತೆ
"ಬೆಳವಡಿ ಮಲ್ಲಮ್ಮ"
ನಮ್ಮ ಕನ್ನಡ ನಾಡಿನಲ್ಲಿ ಜನಿಸಿ, ನಾಡಿನ ಕೀರ್ತಿಪತಾಕೆಯನ್ನು ದೇಶಾದ್ಯಂತ ಪಸರಿಸಿದ ವೀರ ಮಾತೆಯರಲ್ಲಿ ಸಾವಿತ್ರಿ ಭಾಯಿ ಅಥವಾ ಬೆಳವಡಿ ಮಲ್ಲಮ್ಮ ಪ್ರಮುಖರು.
ಮುಂದೆ ಓದಿ..
ಕರ್ನಾಟಕದ ವೀರ ವನಿತೆ
"ಬೆಳವಡಿ ಮಲ್ಲಮ್ಮ"

ನಮ್ಮ ಕನ್ನಡ ನಾಡಿನಲ್ಲಿ ಜನಿಸಿ, ನಾಡಿನ ಕೀರ್ತಿಪತಾಕೆಯನ್ನು ದೇಶಾದ್ಯಂತ ಪಸರಿಸಿದ ವೀರ ಮಾತೆಯರಲ್ಲಿ ಸಾವಿತ್ರಿ ಭಾಯಿ ಅಥವಾ ಬೆಳವಡಿ ಮಲ್ಲಮ್ಮ ಪ್ರಮುಖರು.
ಮುಂದೆ ಓದಿ..

ಇವರು ಸೋದೆಯ ಮಹಾರಾಜ ಮಧುಲಿಂಗ ನಾಯಕರ ಸುಪುತ್ರಿ.ಐದನೇ ವಯಸ್ಸಿನಲ್ಲಿ ಮಲ್ಲಮ್ಮನಿಗೆ ವಯಸ್ಸಿಗೆ ಮೀರಿದ ಧೈರ್ಯ, ಕ್ಷಾತ್ರ ತೇಜಸ್ಸು ಮುಖದಲ್ಲಿ ರಾರಾಜಿಸುತ್ತಿತ್ತಂತೆ. ತನ್ನ ಊರಿನ ಜನರ ಮೇಲೆ ಬಹಳ ವಾತ್ಸಲ್ಯ ಇಟ್ಟುಕೊಂಡಿದ್ದಳು.
ಆ ಚಿಕ್ಕ ವಯಸ್ಸಿನಲ್ಲೇ ಎಲ್ಲ ನಾಯಕತ್ವದ ಗುಣಗಳು ಬೆಳೆಸಿಕೊಂಡಿದ್ದರು. ಇಂತಹ ಸಂಗತಿಗಳನ್ನು ತಿಳಿದ ತಂದೆ ಮಧುಲಿಂಗ ನಾಯಕ, ಮಲ್ಲಮ್ಮ ಮತ್ತು ಸಹೋದರ ಸದಾಶಿವ ನಾಯಕನನ್ನು ಹೆಚ್ಚಿನ ಕಲಿಕೆಗಾಗಿ ಗುರುಕುಲದಲ್ಲಿ ಇಡಲಾಯಿತು.
ಮಲ್ಲಮ್ಮ ಸಂಸ್ಕೃತ, ಕನ್ನಡ, ಉರ್ದು, ಮರಾಠಿ ಭಾಷೆಗಳು ಸುಲಲಿತವಾಗಿ ಓದಲು, ಬರೆಯಲು, ಮಾತನಾಡಲು ಕಲಿತಿದ್ದರು. ಸಹೋದರ ಸದಾಶಿವ ನಾಯಕ ವಿದ್ವಾಂಸನಾಗಿ ಹೊರಬಂದ.
ಮಲ್ಲಮ್ಮನಿಗೆ ಸಾಹಿತ್ಯಾಸಕ್ತಿಯು ಅತಿಯಾಗಿತ್ತು. ರಾಜ್ಯದ ಪ್ರಮುಖ ವಿದ್ವಾಂಸರಿಂದ ಸಾಹಿತ್ಯ ಬಗೆಗಿನ ಉನ್ನತ ಜ್ಞಾನವನ್ನು ಪಡೆದು ಎಲ್ಲ ವಿಭಾಗಗಳಲ್ಲೂ ಪರಿಣಿತಿ ಪಡೆದಳು.ಮಲ್ಲಮ್ಮ ಹದಿನಾರು ವರ್ಷದಲ್ಲಿದ್ದಾಗ ಬೆಳಗಾವಿಯ ಬೈಲುಹೊಂಗಲದ ಈಶಪ್ರಭು ಮಹಾರಾಜರ ಜೊತೆ ಪಾಣಿಗ್ರಹಣವಾಯಿತು. ಮಹಾರಾಜ ಈಶಪ್ರಭುವೂ ಅಪ್ರತಿಮ ಪರಾಕ್ರಮಿಯಾಗಿದ್ದನು.
ಇವರಿಗೆ ನಂತರದ ದಿನದಲ್ಲಿ ಒಂದು ಗಂಡು ಮಗು ಜನಿಸಿತು.ಆ ಮಗುವಿಗೆ ನಾಗಭೂಷಣ ಎಂದು ನಾಮಕರಣ ಮಾಡಲಾಯಿತು.
ಕೆಲವು ನಾರಿಯರು ಕೇವಲ ರಾಜಭವನದಲ್ಲಿ ಮಾತ್ರ ಇರುತ್ತಾರೆ,ಆದರೆ ಮಲಮ್ಮ ಕುಳಿತುಕೊಂಡಿರುವ ರಾಣಿ ಅಗಿರಲಿಲ್ಲ. ಬೆಳವಾಡಿಯಲ್ಲಿ ಎರಡು ಸಾವಿರಕ್ಕೂ ಅಧಿಕ ಮಹಿಳೆಯರ ಸೇನಾತಂಡವನ್ನು ಕಟ್ಟಿ,ಅದಕ್ಕೆ ಬೇಕಾದ ತರಬೇತಿ ಮತ್ತು ಸಹಕಾರವನ್ನು ನೀಡಿದರು.
ಕೆಲವು ನಾರಿಯರು ಕೇವಲ ರಾಜಭವನದಲ್ಲಿ ಮಾತ್ರ ಇರುತ್ತಾರೆ,ಆದರೆ ಮಲಮ್ಮ ಕುಳಿತುಕೊಂಡಿರುವ ರಾಣಿ ಅಗಿರಲಿಲ್ಲ. ಬೆಳವಾಡಿಯಲ್ಲಿ ಎರಡು ಸಾವಿರಕ್ಕೂ ಅಧಿಕ ಮಹಿಳೆಯರ ಸೇನಾತಂಡವನ್ನು ಕಟ್ಟಿ,ಅದಕ್ಕೆ ಬೇಕಾದ ತರಬೇತಿ ಮತ್ತು ಸಹಕಾರವನ್ನು ನೀಡಿದರು.
ಯಾವುದೇ ಸಮಯದಲ್ಲೂ ರಾಜ್ಯಭಾರ ಮಾಡಬೇಕೆನ್ನುವ ಪರಿಸ್ಥಿತಿ ಒದಗಿ ಬಂದರೆ ಎಲ್ಲದಕ್ಕೂ ತಯಾರಾಗಿದ್ದಳು. ಮಲ್ಲಮ್ಮ ಯುದ್ಧ ವಿದ್ಯೆಗಳಾದ ಕುಸ್ತಿ, ಧನುರ್ವಿದ್ಯೆ, ಕತ್ತಿ ವರಸೆ, ಕುದುರೆ ಸವಾರಿ ಇವುಗಳಲ್ಲಿ ಬಹಳ ಪ್ರವೀಣೆಯಾಗಿದ್ದಳು. ಇದರ ಜೊತೆ ಜೊತೆಗೆ ರಾಜನೀತಿ ಮತ್ತು ಅದರ ಸಾಧಕ ಬಾಧಕಗಳನ್ನು ಚೆನ್ನಾಗಿ ಅರಿತಿದ್ದರು.
ನಂತರದ ದಿನಗಳಲ್ಲಿ, ರಾಜ್ಯ ವಿಸ್ತರಿಸುವ ಕಾರ್ಯದಲ್ಲಿ ಮರಾಠರ ಚಕ್ರವರ್ತಿ ಶಿವಾಜಿ ಮಹಾರಾಜರು ತೊಡಗಿದ್ದರು. ದಕ್ಷಿಣ ಭಾರತದಿಂದ ಉತ್ತರದ ಕಡೆಗೆ ಪ್ರಯಾಣ ಬೆಳೆಸುತ್ತಿದ್ದ ಸಮಯವದು. ಆಗ ಅವರ ಸೈನ್ಯ ಬೆಳವಡಿಯ ಪಕ್ಕದಲ್ಲಿ ತಂಗಿತ್ತು.ಮರಾಠರು ರಾಜ್ಯ ವಿಸ್ತಾರದ ಬಯಕೆಯಿಂದ, ಬೆಳವಡಿಗೆ ಒತ್ತಡ ಹಾಕಲು ಪ್ರಯತ್ನಿಸಿದರು.
ಮಲಮ್ಮಳ ಸ್ವಾಭಿಮಾನ ಇದಕ್ಕೆ ಒಪ್ಪಿಗೆ ನೀಡಲಿಲ್ಲ.ಮರಾಠರಿಗೆ ತಲೆ ಬಾಗದೆ ಯುದ್ಧಕ್ಕಾದರೂ ಸೈ ಆದರೆ ತಲೆ ತಗ್ಗಿಸಿ ಮಾತ್ರ ನಿಲ್ಲಲ್ಲ ಎಂದು ತೀರ್ಮಾನಿಸಿದರು.
ನಂತರ ಒಂದು ದಿನ ಮರಾಠಾ ಸೈನಿಕರು ಪ್ರಯಾಣದ ದಾಹದಿಂದ ಅಲ್ಲಿಯ ಗೊಲ್ಲರ ಬಳಿ ಸ್ವಲ್ಪ ಹಾಲನ್ನು ನೀಡಲು ಹೇಳಿದರು. ಮರಾಠರು ಬೆಳವಡಿಗೆ ನೀಡುತ್ತಿದ್ದ ಅಲ್ಪ ಸ್ವಲ್ಪ ತೊಂದರೆಯನ್ನು ತಿಳಿದ -
ನಂತರ ಒಂದು ದಿನ ಮರಾಠಾ ಸೈನಿಕರು ಪ್ರಯಾಣದ ದಾಹದಿಂದ ಅಲ್ಲಿಯ ಗೊಲ್ಲರ ಬಳಿ ಸ್ವಲ್ಪ ಹಾಲನ್ನು ನೀಡಲು ಹೇಳಿದರು. ಮರಾಠರು ಬೆಳವಡಿಗೆ ನೀಡುತ್ತಿದ್ದ ಅಲ್ಪ ಸ್ವಲ್ಪ ತೊಂದರೆಯನ್ನು ತಿಳಿದ -
ಗೊಲ್ಲರು,ಹಾಲು ನೀಡಲು ನಿರಾಕರಿಸಿದರು. ಅದನ್ನು ನೋಡಿ ಮರಾಠರು ಸಿಟ್ಟಿಗೇರುತ್ತಾರೆ. ಪ್ರಕರಣ ದೊಡ್ಡ ಮಟ್ಟಕ್ಕೆ ತಿರುಗಿ ಮಲಮ್ಮ ತನ್ನ ಸೈನ್ಯದ ಜೊತೆಗೆ ಮುಂದಾಳತ್ವ ವಹಿಸಿಕೊಂಡು ಹೊರಾಟಕ್ಕೆ ಸಜ್ಜಾಗುತ್ತಾಳೆ. ನೂರಕ್ಕು ಅಧಿಕ ಮರಾಠಾ ಸೈನಿಕರನ್ನು ಸಧೆಬಡಿಯುತ್ತಾಳೆ.ಮರಾಠಾ ಸೈನಿಕರು ಮೊಸದಿಂದ ಮಲ್ಲಮ್ಮನ ಕುದುರೆಯ ಕಾಲು ಕಡಿದು ಬೀಳಿಸುತ್ತಾರೆ.
ಆಗ ಕೆಳಗಿಳಿದ ಮಲ್ಲಮ್ಮ ಕತ್ತಿ ಗುರಾಣಿಯ ಸಹಾಯದಿಂದ ಹೊರಾಡುತ್ತಾಳೆ. ಆದರೆ ವಿಧಿಯಾಟ ಬೇರೆಯೇ ಇದೆ, ಆ ಸೈನಿಕರು ಮಲ್ಲಮ್ಮನನ್ನು ಸೆರೆ ಹಿಡಿದು ಶಿವಾಜಿ ಮಹಾರಾಜರ ಎದುರು ಕರೆದೊಯ್ದು ನಿಲ್ಲಿಸುತ್ತಾರೆ.
ಪರಾಕ್ರಮಿ ಯೋಧ ಶಿವಾಜಿ ಮಹಾರಾಜರನ್ನು ನೋಡಿದ ಮಲ್ಲಮ್ಮ ಕಿಂಚಿತ್ತೂ ಹೆದರದೆ ಧೈರ್ಯದಿಂದ ತಲೆ ಎತ್ತಿಕೊಂಡು ನಿಂತಿರುತ್ತಾಳೆ. ಒಳ್ಳೆಯ ಸಂಸ್ಕಾರವಂತರಾದ ಶಿವಾಜಿ ಮಹಾರಾಜರು ಆ ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥೈಸಿಕೊಂಡು, ನಂತರ ಹೇಳ್ತಾರೆ:
"ಅಮ್ಮ ನಾವು ಇನ್ನು ಮೇಲೆ ನಿಮಗೆ ಯಾವುದೇ ತೊಂದರೆ ನೀಡುವುದಿಲ್ಲ".
"ಅಮ್ಮ ನಾವು ಇನ್ನು ಮೇಲೆ ನಿಮಗೆ ಯಾವುದೇ ತೊಂದರೆ ನೀಡುವುದಿಲ್ಲ".
ಎಂದು ಹೇಳಿ ಮಲ್ಲಮ್ಮನ ಕಾಲಿಗೆ ಬಿದ್ದು ಅಶೀರ್ವಾದ ಪಡೆದುಕೊಳ್ಳುತ್ತಾರೆ. ನಮ್ಮ ಕನ್ನಡನಾಡಿನ ಸ್ತ್ರೀ ಒಬ್ಬಳು ಅಂತಹ ಮಹಾತ್ಮ ಛತ್ರಪತಿ ಶಿವಾಜಿ ಮಹಾರಾಜರ ಮನಸ್ಸನ್ನು ಗೆದ್ದು "ಮಾತೆ" ಎಂದು ಕರೆಸಿಕೊಂಡ ಧೈರ್ಯವಂತೆ ಮಲ್ಲಮ್ಮ.
ಶಿವಾಜಿ ಮಹಾರಾಜರ ಸೈನಿಕರಿಂದ ಸಕಲ ಮರ್ಯಾದೆಯೊಂದಿಗೆ ತನ್ನ ರಾಜ್ಯಕ್ಕೆ ಮರಳಿದ ಸ್ವಾಭಿಮಾನಿ ವೀರ ವನಿತೆ ಬೆಳವಡಿ ಮಲ್ಲಮ್ಮರಿಗೆ ಶತ ಶತ ಪ್ರಣಾಮಗಳು.




