ಕೆಲವರು ತುಳು ನೆಲೆಯ ಗುಡಿಗಳು ಕನ್ನಡಿಸಲಾದವು/ವೈದೀಕರಿಸಲಾದವು ಅಂತ ಹೇಳ್ತಿದ್ದಾರೆ, ಸತ್ಯ .
ಅದಕ್ಕೆ ಆ‌ ನೆಲೆಯ ತುಳುವರನ್ನೇ ದೂರಬೇಕು .
ಹಾಗಂತ ಒಳನಾಡಿನಲ್ಲೆಲ್ಲವೂ ಸರಿಯಾಗಿದೆಯೇ !?
ಇಲ್ಲ .
ಬೋರೇ ದೇವರು ಶ್ರೀ ಭೈರವೇಶ್ವರ ಆದನು‌. ಮೇಲುಕೋಟೆ ಚಲುವರಾಯ ಚಲುವನಾರಾಯಣನಾದ. ಬೇಲೂರ ಚೆನ್ನಿಗರಾಯ, ಚನ್ನಕೇಶವನಾದ.
ಮಾದಯ್ನ್ ಗಿರಿ/ಮಾದಪ್ಪನ ಬೆಟ್ಟ ಮಲೆಮಹದೇಶ್ವರ ಬೆಟ್ಟ ಆಗಿದೆ. ಬಿಸಿಲು ಮಾರಮ್ಮಳನ್ನು ಶಾಖಾಂಬರಿಯನ್ನಾಗಿಸುವ ಪ್ರಯತ್ನ ಎಡಬಿಡದೆ ನಡೆಯುತ್ತಿದೆ. ಬೆಳ್ಳಿವರದಮ್ಮನನ್ನ ಶ್ವೇತವರಾಹಿ ಮಾಡಿಟ್ಟಿದ್ದಾರೆ. ಕಾಡಸಿಂಗಮ್ಮ ಬನಶಂಕರಿಯಾಗಿದ್ದಾಳೆ. ಕೊಲ್ಲಾಪುರದಮ್ಮ ಮಹಾಲಕ್ಷ್ಮಿಯಾಗಿದ್ದಾಳೆ. ಕೆಂಪಮ್ಮ ಹಿರಣ್ಯಾಂಭ ಆಗಿದ್ದಾಳೆ.
ಸಾವಿರಾರು ವರ್ಷಗಳ ಪರಂಪರೆಯುಳ್ಳ ಕೆಂಚರಾಯನೇ ರುದ್ರನಾಗಿಸಿಬಿಟ್ಟಿದ್ದಾರೆ. ಅಮ್ಮನ ಬಂಟ ದೈವವಾಗಿದ್ದ ಸೋಮರು ಸೋಮೇಶ್ವರವಾಗಿಬಿಟ್ಟಿದ್ದಾರೆ. ಮತ್ತಿತಾಳಯ್ಯನನ್ನು ಸುಬ್ರಹ್ಮಣ್ಯನನ್ನಾಗಿಸುತ್ತಿದ್ದಾರೆ. ಮುತ್ತಯ್ಯ ಹನುಮಂತನಾದ. ಹುಲಿಯಪ್ಪ ನರಸಿಂಹನಾಗಿದ್ದಾನೆ, ಅದರಲ್ಲೂ ಕುನಸಿಂಗ್ರಿಯಂತಹ ಜಾನಪದ ದೇವರು “ಯೋಗಾನರಸಿಂಹ” ಆಗಿಬಿಟ್ಟಿದ್ದಾನೆ!
ಯಜ್ಞ ಯಾಗ ಸಂಸ್ಕೃತಿಗೆ ಬಲಿಯಾದ ಸತಿ ಪರಂಪರೆಯ ಕೆಂಡ ತುಳಿಯುವ ಪ್ರತಿರೋಧ ಸಂಸ್ಕೃತಿಯ ಕೇಂದ್ರಗಳಾಗಿದ್ದ ಮಾರಿಗುಡಿಗಳಲ್ಲಿ ಈಗ ಯಜ್ಞಗಳು ನಡೆಯುತ್ತಿವೆ. ಯಜಮಾನ/ಕುಲಸ್ವಾಮಿ/ಗುಡ್ಡ/ನೀಲಗಾರ/ಜೋಗಿ/ದಾಸಯ್ಯ ನಡೆಸುತ್ತಿದ್ದ ಶುಭಕಾರ್ಯ ಸೂತಕಕಾರ್ಯಗಳಿಗೆಲ್ಲ ಈಗ ಬ್ರಾಹ್ಮಣರನ್ನು ಕರೆಸುವ ಚಾಳಿ ಬೆಳೆದಿದೆ.

ಹೇಳುತ್ತಾ ಹೋದ್ರೆ ಇದು ಮುಗಿಯದ ಗೋಳು.
ಈ ಸಂಸ್ಕೃತಕರಣ/ಬ್ರಾಹ್ನಣಕರಣ ಅನ್ನೋದು ಕ್ರೈಸ್ತ ಮಿಷನರಿಗಳಂತೆ, ಜಿಹಾದಿನಂತೆ ಕೆಲಸ ಮಾಡ್ತಿವೆ. ವೈದಿಕರಲ್ಲದ ಜನ “ಅದೂ ನಮ್ಮದೇ” ಅನ್ನೋ ಭ್ರಮೆಯಲ್ಲಿ ನಿಜವಾದ “ತಮ್ಮದ್ದೆಲ್ಲವನ್ನೂ” ಕಳೆದುಕೊಳ್ಳುವ ದಾರಿಯಲ್ಲಿ ಸಾಗ್ತಿದ್ದಾರೆ.
You can follow @prashanthv_OoO_.
Tip: mention @twtextapp on a Twitter thread with the keyword “unroll” to get a link to it.

Latest Threads Unrolled:

By continuing to use the site, you are consenting to the use of cookies as explained in our Cookie Policy to improve your experience.