ಅದೊಂದು ಕಾಲವಿತ್ತು, ಜನರನ್ನು ನಗಿಸಲು ಹೇಸಿಗೆಯೆನಿಸುವಂತ ಸಂಭಾಷಣೆಯಾಗಲಿ ಅಥವಾ ಮತ್ತೊಬ್ಬರನ್ನು ಅವಮಾನಿಸಿ ಕೇಕೆ ಹಾಕುವುದಾಗಲಿ ಇರಲಿಲ್ಲ.

ಕನ್ನಡ ಚಲನ ಚಿತ್ರರಂಗದಲ್ಲಿ ಹಾಸ್ಯ ರಸದ ಹೊಳೆ ಹರಿಸಿದವರು ಬೆರಳೆಣಿಕೆಯಷ್ಟೇ, ಅವರುಗಳಲ್ಲಿ ಆ ಹೊಳೆ ಸೇರುವ ಸಾಗರವನ್ನು ಪರಿಚಯಿಸಿದವರು #ಹಾಸ್ಯಚಕ್ರವರ್ತಿ ನರಸಿಂಹ ರಾಜು ಅವರು.
ಕೋಟ್ಯಾಂತರ ಜನರನ್ನು ನಕ್ಕು ನಲಿಸಿ ಅವರ ಕಷ್ಟಗಳನ್ನು ಮರೆಯುವಂತೆ ಮಾಡಿದ ವಿದೂಷಕನ ಪುಣ್ಯತಿಥಿಯಂದು ನನ್ನ ಒಂದು ನಮನ.

1923 ಜುಲೈ 24ರಂದು ತಿಪಟೂರಿನಲ್ಲಿ ಜನಿಸಿದರು. ತಂದೆ ರಾಮರಾಜು ಪೋಲಿಸ್ ಕಾನಸ್ಟೇಬಲ್ , ತಾಯಿ ವೆಂಕಟಲಕ್ಷ್ಮಿ ಗೃಹಿಣಿ. ಬಾಲ್ಯದಲ್ಲಿ ಬಡತನವಿದ್ದದ್ದರಿಂದ ಇವರ ಚಿಕ್ಕಪ್ಪ ಲಕ್ಷ್ಮಿಪತಿರಾಜು ಇವರು ಕೇವಲ ನಾಲ್ಕು
ವರ್ಷವಿದ್ದಾಗಲೇ ಚಂದ್ರ ಮೌಳೇಶ್ವರ ಡ್ರಾಮಾ ಕಂಪನಿಗೆ ಸೇರಿಸಿದರು. ಈ ಪ್ರವಾಸಿ ನಾಟಕ ತಂಡ ಸೇರಿದ ನರಸಿಂಹ ರಾಜುರವರು ಪ್ರಹ್ಲಾದ, ಲೋಹಿತಾಶ್ವ ಮುಂತಾದ ಪಾತ್ರಗಳಲ್ಲಿ ಅಭಿನಯಿಸಿದರು. ನಂತರ ದೊಡ್ಡವರಾದ ಮೇಲೆ ತಮ್ಮದೇ ಸ್ವಂತ ನಾಟಕ ಕಂಪನಿ ಆರಂಭಿಸಿ ಗೋರ ಕುಂಬಾರ ,ಸತ್ಯ ಹರಿಶ್ಚಂದ್ರ ಮುಂತಾದ ನಾಟಕಗಳನ್ನು ಪ್ರದರ್ಶಿಸಿದರು. ನಂತರ ತಮ್ಮ ಕಂಪನಿ
ನಷ್ಟವಾದಾಗ`ಎಡತೊರೆಯ ಡ್ರಾಮಾ ಕಂಪನಿ' ಸೇರಿದರು. ಹೀಗೆ ಸುಮಾರು 27 ವರ್ಷಗಳ ಕಾಲ ವಿವಿಧ ನಾಟಕ ಕಂಪನಿಗಳಲ್ಲಿ ಹಲವಾರು ಪಾತ್ರ ಮಾಡಿದರು.

ಹೀಗೆ ಗುಬ್ಬಿ ವೀರಣ್ಣ ಅವರ ನಾಟಕ ಕಂಪನಿಯಲ್ಲಿ ಸಹನಟ ಮುತ್ತುರಾಜ್ ಅವರ ಗೆಳೆತನ, ಒಮ್ಮೆ ಮೈಸೂರಿನ ಟೌನ ಹಾಲ್ ನಲ್ಲಿ ಬೇಡರ ಕಣ್ಣಪ್ಪ ನಾಟಕ ಪ್ರದರ್ಶನ ನೋಡಲು ಬಂದಿದ್ದ ಹೆಚ್.ಎಲ್.ಎನ್.ಸಿಂಹರವರು,
ಡಾ. ರಾಜಕುಮಾರ್ ,ನರಸಿಂಹರಾಜು ಮತ್ತು ಜಿ.ವಿ.ಅಯ್ಯರ್ ಅಭಿನಯ ನೋಡಿ ತಮ್ಮ ಬೇಡರ ಕಣ್ಣಪ್ಪ ಚಿತ್ರಕ್ಕೆ ಈ ಮೂವರನ್ನು ಆಯ್ಕೆ ಮಾಡಲು ನಿರ್ಧರಿಸಿದರು. ಈ ಮೂವರು ಮದ್ರಾಸ್ ಗೆ ಹೋಗಿ ಸ್ಕ್ರೀನ್ ಟೆಸ್ಟ್ ನೀಡಿ ಚಿತ್ರದಲ್ಲಿ ಅಭಿನಯಿಸಲು ಆಯ್ಕೆಯಾದರು. 1954 ರಲ್ಲಿ ಬೇಡರ ಕಣ್ಣಪ್ಪ ಬಿಡುಗಡೆಯಾಯಿತು, ಇದು ಇವರಿಬ್ಬರ ಮೊದಲನೆಯ ಸಿನಿಮಾ
ಇಲ್ಲಿಂದ ನರಸಿಂಹ ರಾಜು ಹಿಂದೆ ನೋಡಿದ್ದೇ ಇಲ್ಲ.ಅಂದಿನ ದಿನಗಳಲ್ಲಿ ನರಸಿಂಹರಾಜು ಮತ್ತು ಬಾಲಕೃಷ್ಣ ಜೋಡಿ ಕನ್ನಡ ಚಿತ್ರಗಳಲ್ಲಿ ಸೃಷ್ಟಿಸಿದ ಹಾಸ್ಯ ಧಾರೆ ಅವಿಸ್ಮರಣೀಯವಾದುದು. ರಾಜ್ ರ ಪ್ರತಿ ಚಿತ್ರಗಳಲ್ಲೂ ನರಸಿಂಹ ರಾಜು ಇರಲೇ ಬೇಕಿತ್ತು. ಒಂದು ಸಂದರ್ಶನದಲ್ಲಿ ಡಾ.ರಾಜಕುಮಾರ್ `` ಮೊದಲು ನಿರ್ಮಾಪಕರು ತಮ್ಮ ಚಿತ್ರಗಳಿಗೆ ನರಸಿಂಹರಾಜು
ಕಾಲ್ ಶೀಟ್ ಪಡೆದ ಮೇಲೆ ನಾಯಕನಟರನ್ನು ಸಂಪರ್ಕಿಸುತ್ತಿದ್ದರು'' ಎಂದು ಹೇಳಿದ್ದು ನರಸಿಂಹರಾಜುರವರಿಗೆ ಇದ್ದ ಜನಪ್ರಿಯತೆಯನ್ನು ತಿಳಿಸುತ್ತದೆ. ಪ್ರೊಫೆಸರ್ ಹುಚ್ಚುರಾಯ ಎಂಬ ಚಿತ್ರವನ್ನು ನಿರ್ಮಾಣ ಮಾಡಿ ನಟಿಸಿದ್ದರು.

ಬಾಲ್ಯದಲ್ಲಿ ತೀವ್ರ ಬಡತನ ಎದುರಿಸಿದ ಪರಿಣಾಮವೋ ಏನೋ, ನರಸಿಂಹ ರಾಜು ಅವರು ತಮ್ಮ ದುಡಿತವನ್ನು ಪೋಲು ಮಾಡಲಿಲ್ಲ, ಆಗಿನ
ಕಾಲದಲ್ಲಿಯೇ ಭೂಮಿಯ ಬೆಲೆ ಅರಿತ ಅವರು, ಮದರಾಸಿನಲ್ಲಿ ಹಾಗೂ ಬೆಂಗಳೂರಿನಲ್ಲಿ ಭೂಮಿ ಖರೀದಿ ಮಾಡಿದ್ದರು, ಮದರಾಸಿನಲ್ಲಿ ಹೂಡಿಕೆ ಮಾಡಿದ ಕನ್ನಡ ಚಲನಚಿತ್ರ ರಂಗದ ಮೊದಲನೇ ವ್ಯಕ್ತಿ ಇವರೇ,

ತಮ್ಮ ಹಿರಿಯ ಪುತ್ರ ನರಹರಿ ರಾಜು ಅಪಘಾತದಲ್ಲಿ ನಿಧನರಾಗಿದ್ದು ನರಸಿಂಹರಾಜುರವರ ಮನಸ್ಸಿಗೆ ಬಹುವಾದ ಆಘಾತ ನೀಡಿತು.
ಸುಮಾರು 250 ಚಿತ್ರಗಳಲ್ಲಿ ನಟಿಸಿದ್ದ ಅವರು 1979 ಜುಲೈ 11 ರಂದು ಬೆಳಿಗ್ಗೆ 4.30 ಗಂಟೆಗೆ ತೀವ್ರವಾದ ಹೃದಯಾಘಾತದಿಂದ ತಮ್ಮ 56 ನೇ ವಯಸ್ಸಿನಲ್ಲಿ ನಿಧನರಾದರು.
You can follow @Sheshapatangi.
Tip: mention @twtextapp on a Twitter thread with the keyword “unroll” to get a link to it.

Latest Threads Unrolled:

By continuing to use the site, you are consenting to the use of cookies as explained in our Cookie Policy to improve your experience.