Thread on "ಪ್ರೇಮ ಮತ್ತು ಭಕ್ತಿ" 🙏🏻

ನಾವು ತಿಳಿದುಕೊಂಡ ಈಗಿನ "ಪ್ರೇಮ" ಕ್ಕೂ ನಿಜವಾದ ಪ್ರೇಮಕ್ಕೂ ಇರುವ ವ್ಯತ್ಯಾಸ ಇಲ್ಲಿದೆ.

@hsraghav @acharya2 @ShrikaanthK @raghuprajju @Sheshapatangi
1) ನಿಮ್ಮ ನೆರೆಹೊರೆಯವರಿಲ್ಲಿಯೂ ನಿಮ್ಮ ಸಂಪರ್ಕದಲ್ಲಿ ಬಂದ ಎಲ್ಲರಲ್ಲಿಯೂ ಏಕತ್ವವನ್ನು ಅನನ್ಯತೆಯನ್ನು ವಾಸ್ತವವಾಗಿ ಅನುಭವ ಮಾಡುವುದೇ ಪ್ರೇಮ.
2) ಒಂದೇ ನ್ಯಾಯಬದ್ಧವಾದ ನಿಯಮವು ಪ್ರೇಮ ಪ್ರೇಮದಲ್ಲಿ ಬಾಳುವದೆಂದರೆ ನಿಮಗೆ ನೀವು ಸತ್ಯವಾಗಿದ್ದಂತೆ
3) ನಿಜವಾದ ಪ್ರೇಮವು ಸೂರ್ಯನಂತೆ ಆತ್ಮವನ್ನು ವಿಕಾಸ ಮಾಡುತ್ತದೆ. ಮೋಹವು ಘನ ಹಿಮದಂತೆ ಆತ್ಮವನ್ನು ಇಡಿಕಿರಿಸಿ ಕುಗ್ಗಿಸುತ್ತದೆ
4) ಮೋಹಾಸಕ್ತಿಗಳನ್ನು ಪ್ರೇಮವೆಂದು ತಪ್ಪಾಗಿ ತಿಳಿಯಬೇಡಿರಿ.
ಎಲ್ಲಾ ಕಾಮುಕತೆ ಇಂದ್ರಿಯ ಲೋಲುಪತೆಗಳನ್ನು ಕಳಚಿದ ಪ್ರೇಮವೇ ಆಧ್ಯಾತ್ಮಿಕ ಜ್ಞಾನಪ್ರಕಾಶವು.
5) ಭಕ್ತಿಯು ಅತ್ತು ಅತ್ತು ಬೇಡುವ ನಿಷೇಧ ಸ್ಥಿತಿಯಲ್ಲ. ಅದು ಅವರ್ಣನೀಯವಾದ ಸಮತಾಭಾವ, ಉಜ್ವಲವಾದ ಮಾಧುರ್ಯ, ದಿವ್ಯವಾದ ನಿರ್ಲಕ್ಷತೆ.
ನಾವು ಕಾಣುವ ಸರ್ವ ವಸ್ತುಗಳಲ್ಲಿ ಸರ್ವಾತ್ಮವನ್ನು ನೋಡುವುದೇ ಭಕ್ತಿ. ಸರ್ವಾತ್ಮವೇ ಸೌಂದರ್ಯ, 'ಅದೇ ನಾನು' (ತತ್ವಮಸೀ) ಎಂಬ ಅನುಭವವೇ ಭಕ್ತಿ.
6)ಪ್ರೇಮವೆಂಬ ಶಬ್ದವನ್ನು ಉಚ್ಚಾರಣೆ ಮಾಡಿದ ಮಾತ್ರಕ್ಕೆ ದೈವೀ ಪ್ರಮೋಜ್ವಲತೆಯನ್ನು ಸೂಚಿಸುವುದಕ್ಕೆ ಬದಲು ಅತಿ ಮೋಹವನ್ನು ಕಾಮುಕತೆಯನ್ನು ಮೌಢ್ಯವನ್ನು ಸೂಚಿಸುತ್ತದೆ.
7) ಪ್ರೇಮವಿರುವಲ್ಲಿ ದೊಡ್ಡದಿಲ್ಲ, ಸಣ್ಣದಿಲ್ಲ, ಕೀಳಿಲ್ಲ, ಮೇಲಿಲ್ಲ.
8) ಗೊಡ್ಡು ಹರಟೆಯ ಜನರ ಹಾಗೂ ಅಮಾನುಷ ದೃಶ್ಯಗಳನ್ನು ನಂಬತಕ್ಕವರ ಮತ್ತು ಲಜ್ಜಾಸ್ಪದವಾದ "ಗೌರವಾಪೇಕ್ಷೆಯ" ಲಜ್ಜಾಹೀನ ಗುಲಾಮರ ಸಹವಾಸದಷ್ಟು ವಿಷಮಯವಾದುದು ಬೇರಾವುದೂ ಇಲ್ಲ, ಎನ್ನುವುದು ಸತ್ಯ; ಆದರೆ ಎಲ್ಲಿ ಪ್ರಭುವಾದ ಪರಿಶುದ್ಧ ಪ್ರೇಮವು ಬೀಡುಬಿಟ್ಟಿದೆಯೋ ಅಲ್ಲಿ ಅಧಿಕಪ್ರಸಂಗಿಗಳಾದ ಅಲೆಮಾರಿಗಳು ಅಂಡಲೆಲಾರರು.
9) ಪ್ರೇಮ -
ಎಲ್ಲ ಬದಲಿಪ ವಿಶ್ವಕು
ವಲ್ಲಭ ನಾನೆ ಮೂಲವು, ಮುಕ್ತಿಯು,
ಓ ಮಾನವ! ಅದರಾಚೆ ಬರಿಪೊಳ್ಳು
ನೀ ಮನದಿ, ನಂಬದಿರಿದ ನೆರೆಸುಳ್ಳು,
ಒಂದೇ ದಾರದಿ ಕೋದ ಜಪಸರದ ಮಣಿಗಳೊಲು, ನಿಂದಿಹುದು ಸಕಲ ವಿಶ್ವಾತ್ಮನಾದೆನ್ನ ಆಧಾರದಲಿ. "

#ರಾಮ_ಹೃದಯ 🙏🏻
You can follow @mebhargav.
Tip: mention @twtextapp on a Twitter thread with the keyword “unroll” to get a link to it.

Latest Threads Unrolled:

By continuing to use the site, you are consenting to the use of cookies as explained in our Cookie Policy to improve your experience.