ದೇಹಾತ್ಮಗಳಲ್ಲಿ ಪರಮಾತ್ಮನ ಬಿಂಬಕ್ರಿಯೆ

ಮಗು ಹುಟ್ಟಿದಾಗ ಕೈಕಾಲುಗಳಿರುವುದಿಲ್ಲ (ಇದ್ದರೂ ಪ್ರಯೋಜನಕ್ಕೆ ಬಾರದು). ಇಲ್ಲಿ ಪರಮಾತ್ಮನು 'ಮತ್ಸ್ಯಾ'ವತಾರ ನಾಗಿದ್ದು ರಕ್ಷಿಸುತ್ತಾನೆ.

ಮಗು ಹುಟ್ಟಿ ಆರು ತಿಂಗಳಾದರೆ ಅದು ಬೋರಲಾಗಿ ಬೆನ್ನನ್ನು ತೋರುತ್ತದೆ. ಇಲ್ಲಿ ಪರಮಾತ್ಮನು 'ಕೂರ್ಮ'ನಾಗಿ ಪರಿವರ್ತಿತನಾದರೆ ಈ ಅವಸ್ಥೆಯು ಮಗುವಿಗೆ ಬರುತ್ತದೆ.
ಮಗುವಿಗೆ ಒಂದು ವರ್ಷವಾದರೆ ಅಂಬೆಗಾಲಿಡುತ್ತಾನೆ (ಚತುಷ್ಪಾತ್). ಮಣ್ಣನ್ನು ತಿನ್ನುತ್ತಾನೆ. ಆಗ ಅಲ್ಲಿ ಶ್ರೀ ಹರಿಯು 'ವರಾಹ'ನಾಗಿ ವರ್ತಿಸುತ್ತಾನೆ.

ಇಲ್ಲಿಯವರೆಗೆ ಪರಮಾತ್ಮನು ತನ್ನ ಮೂಢ ತೆರನಾದ ರೂಪಗಳನ್ನು ಇಟ್ಟಿರುತ್ತಾನೆ.
ಮಗುವು ಮೂರು ವರ್ಷಕ್ಕೆ ಕಾಲಿರಿಸಿದರೆ ಓಡಾಟದಲ್ಲಿ ನರ ರೂಪ, ಬುದ್ಧಿಯಲ್ಲಿ(ಶಿರ) ಮೃಗ ರೂಪ ಬರುತ್ತದೆ. ಈ ವಯಸ್ಸಿನ ಬಾಲಕನು ಎತ್ತಿಕೊಳ್ಳುವಷ್ಟು ಚಿಕ್ಕವನಲ್ಲ, ನಡೆಯುವಷ್ಟು ದೊಡ್ಡವನಲ್ಲ. ಮನೆಯಲ್ಲಿ ಇರುವಷ್ಟು ಚಿಕ್ಕವನಲ್ಲ, ಹೊರಗೆ ಹೋಗುವಷ್ಟು ದೊಡ್ಡವನಲ್ಲ. ಚೆಂಡು ಬೇಕೆಂಬ ಜ್ಞಾನವಿದೆ, ತೊಟ್ಟಿಯಲ್ಲಿ ಬೀಳುತ್ತೇನೆಂಬ ಜ್ಞಾನವಿರುವುದಿಲ್ಲ.
ಹಾವು, ಚೇಳು, ಬೆಂಕಿಗಳ ಭಯವಿರುವುದಿಲ್ಲ. ಸಿಕ್ಕಿದ್ದನ್ನು ಕುಡಿಯುವುದು, ಏನೆಲ್ಲಾ ಪರಿಚೇಷ್ಟೆಗಳು ಈ ವಯಸ್ಸಿನ ಬಾಲಕನಲ್ಲಿ!  (ಅಲಕ್ಷ್ಯ ಮಾಡಿದಲ್ಲಿ ಯಾವ  ವೇಳೆಯಲ್ಲಾದರೂ ಅಪಮೃತ್ಯುವು ಘಟಿಸಬಹುದು). ಈ ಕಾಲದಲ್ಲಿ ನಮ್ಮಲ್ಲಿ 'ಶ್ರೀ ಲಕ್ಷ್ಮೀನರಸಿಂಹ' ನೆಲೆಸಿದ್ದು ರಕ್ಷಿಸುತ್ತಾನೆ.
ಮನುಷ್ಯನು ಎಂಟನೇ ವರ್ಷ ವಯಸ್ಸಿಗೆ ಬಂದರೆ ಪರಿಪೂರ್ಣವಾದ ಜ್ಞಾನಾರ್ಹವಾಗುತ್ತಾನೆ. ಆಗ ಆ ಅವಸ್ಥೆಗೆ 'ವಾಮನ' ರೂಪವೇ ಕಾರಣ. ಅದಕ್ಕಾಗಿಯೇ ಆ ಅವಸ್ಥೆಯಲ್ಲಿ ಉಪನಯನವನ್ನು ಮಾಡುತ್ತಾರೆ. (ಸಕಲರೂ ಅವರವರ ವೃತ್ತಿ ಧರ್ಮದಲ್ಲಿ ತೊಡಗುತ್ತಾರೆ.)
ಉಪನೀತನಾದ ಮೇಲೆ ವೇದಾಧ್ಯಯನವನ್ನು (ಸ್ವವಿಹಿತ ವೃತ್ತಿಯನ್ನು) ಕೈಕೊಳ್ಳಬೇಕು. ಇದು ಪಿತೃ ಆಜ್ಞೆ- ಮಗುವನ್ನು ಗುರುಕುಲಕ್ಕೆ ಕಳುಹಿಸಿದ
ತಾಯಿಯು ಮೃತ ಪ್ರಾಯಳಾಗಿರುತ್ತಾಳೆ. ಮಗನು ವಿದ್ವಾಂಸನಾಗಿ ಬಂದುದನ್ನು ಕಂಡು ಪುನರ್ಜೀವವನ್ನು ಪಡೆದಂತೆ ಹಿಗ್ಗುತ್ತಾಳೆ. ಇದೇ 'ಪರಶುರಾಮಾ'ವತಾರ - ಬ್ರಹ್ಮಚಾರಿ.
ವಿದ್ಯಾಭ್ಯಾಸವು (8 ರಿಂದ 20-25 ವರ್ಷಗಳು) ಮುಗಿದ ಮೇಲೆ ಕಾಯಕದ ಮೂಲಕ ದ್ರವ್ಯಾರ್ಜನೆ(ರಾಜ್ಯಭಾರ), ಕುಟುಂಬ ಪೋಷಣೆಯನ್ನು ಮಾಡಬೇಕು. ಆ ಕಾರ್ಯವನ್ನು 'ಶ್ರೀರಾಮ'ನಾಗಿ ನಿಂತು ಶ್ರೀ ಹರಿಯು ಮಾಡಿಸುತ್ತಾನೆ.
ಆರ್ಜನೆಯು ತೃಪ್ತಿಕರವಾದ ಮೇಲೆ ಮದುವೆ, ಮಕ್ಕಳು. ಇಲ್ಲಿ 'ಕೃಷ್ಣ'ನಾಗಿ ಶ್ರೀ ಹರಿಯು ತೃಪ್ತಿಪಡಿಸುತ್ತಾನೆ. ಈ ರಾಮ, ಕೃಷ್ಣಾದಿ ರೂಪಗಳು 20-25 ವರ್ಷಗಳಿಂದ 80 ವರ್ಷಗಳವರೆಗೆ ನಮ್ಮಲ್ಲಿ ಸನ್ನಿಹಿತವಾಗಿರುತ್ತವೆ. ಆದ್ದರಿಂದಲೇ ಇದನ್ನು ಸ್ಮರಿಸುತ್ತ ಸದಾ ರಾಮ, ಕೃಷ್ಣಾ ಎಂದು ನುಡಿಯುತ್ತಿರಬೇಕು. +
ಬರೀ ರಾಮ, ಕೃಷ್ಣ ಎಂದರೆ ಏನೂ ಪ್ರಯೋಜನವಿಲ್ಲ. ಕೊಡುವಾಗ ರಾಮ ರೂಪದಿಂದ, ತೆಗೆದುಕೊಳ್ಳುವಾಗ ಕೃಷ್ಣರೂಪದಿಂದ ಶ್ರೀ ಹರಿಯು ನಮ್ಮಲ್ಲಿರುತ್ತಾನೆಂಬ ಅನುಸಂಧಾನ ಬೇಕು.

80 ರಿಂದ 100 ನೇ ಆಯುರ್ವರೆಗೆ ಮೈಮೇಲೆ ಅರಿವೆಯು ಇದ್ದುದರ, ಇಲ್ಲದುದರ ಪರಿವೆಯು ನಷ್ಷವಾಗಿರುತ್ತದೆ. ಇಲ್ಲಿ 'ಬುದ್ಧ'ನ ವ್ಯಾಪಾರವು ಸಾಗಿರುತ್ತದೆ ಎಂದು ತಿಳಿಯಬೇಕು.
100 ನ್ನು ದಾಟಿದ ಮೇಲೆ ಅಶ್ವಾರೋಹಿ (ʼಕಲ್ಕಿʼ) ಯಾಗಲೇ ಬೇಕು.
(ಅವಭೃತ).

ಈ ಉಪಾಸನಾ ಕ್ರಮವು ಸಿದ್ಧಿಯಾದವರಿಗೆ ದೇಹಾಭಿಮಾನವಿರುವುದಿಲ್ಲ. ಇದನ್ನು ಓದಿದವರಿಗೆ ಆಯುಷ್ಯ, ಆರೋಗ್ಯ, ಐಶ್ವರ್ಯಾದಿಗಳು ಅಭಿವೃದ್ದಿ ಆಗುವವು.

ಕೃಪೆ: ಪಾಂಡುರಂಗ ಪಾರಿಜಾತ
ವ್ಯಾಖ್ಯಾನಕಾರರು:
ಪಂ||ವೇ||ಬಿ.ಸತ್ಯನಾರಾಯಣಾಚಾರ್ಯ

Via WhatsApp
You can follow @_shayans.
Tip: mention @twtextapp on a Twitter thread with the keyword “unroll” to get a link to it.

Latest Threads Unrolled:

By continuing to use the site, you are consenting to the use of cookies as explained in our Cookie Policy to improve your experience.